Friday, December 24, 2021

ಚಿಟ್ಟೆ


ಚಿಟ್ಟೆ ಚಿಟ್ಟೆ, ಬಾ ಬಾ

ಚಿಟ್ಟೆ ಚಿಟ್ಟೆ , ಬಾ ಬಾ

ನನ್ನ ಪಕ್ಕ ಕೂರು ಬಾ

ಎಲ್ಲೆಲ್ಲೋ ಹಾರಾಡಿ ಬಾ


ಚಿಟ್ಟೆ ಚಿಟ್ಟೆ, ಎಲ್ಲಿರುವೆ?

ಎಲೆಗಳ ಹಿಂದೆ ಅಡಗಿರುವೆ

ಚಿಟ್ಟೆ ಚಿಟ್ಟೆ, ಎಲ್ಲಿರುವೆ?

ಹೂಗಳ ಒಳಗೆ ಅಡಗಿರುವೆ


ಹೂಗಳ ಸುತ್ತ ಹಾರಾಡುವೆ

ಹೂಗಳ ಮೇಲೆ ಕುಳಿತಿರುವೆ

ಬಣ್ಣ ಬಣ್ಣದ ರೆಕ್ಕೆಗಳ ಜೊತೆ

ಮರಿಹುಳುವಿಂದ ಚಿಟ್ಟೆಯಾಗುವೆ


ಚಿಟ್ಟೆ ಚಿಟ್ಟೆ, ಬಾ ಬಾ

ನಮ್ಮಯ ತೋಟದಲ್ಲಿರು

ನನಗೂ ನಿನ್ನಂತೆ ಹಾರಾಡುವುದು

ಸದಾ ಕಲಿಸುತ್ತಿರು.    

                               - ಅನಘ ಕೆ ಉಡುಪ