ಆಗಂತುಕಳಾಗಿ ಹೋದೆನಾ !? ನಾ ನನ್ನ ಊರಲ್ಲೇ
ಹಿರಿಯ ತಲೆಗಳೆಲ್ಲ ಹೊರಟು ಹೋದಮೇಲೆ
ಉಳಿದವರು ನನ್ನನ್ನು ಗುರುತು ಹಿಡಿಯುವರೇ !!
ಎದೆಯಿಂದ ಹೊರ ನುಗ್ಗಿದೆ ನೆನಪುಗಳ ಲಾವಾರಸ
ಮನದಲ್ಲಿ ಮೂಡಿ ಮರೆಯಾಗಿ ಮತ್ತೆ ಮೂಡಿದೆ
ಕಂಡದೆಲ್ಲ ಹಳೆಯ ನೆನಪು ತರುತ್ತಿದೆ
ಎಲ್ಲವೂ ನನ್ನದಾದರೂ ನನ್ನದಲ್ಲದಾಗಿದೆ
ಜಾಗತೀಕರಣ ನವೀಕರಣದ ವೈಭವೀಕರಣ
ತಿದ್ದಿಬಿಟ್ಟಿದೆ ಊರ ಮುಖವನ್ನ
ಅಳಿಸಿ ಹಾಕಿದೆ ಸನಾತನ ಕುರುಹುಗಳನ್ನ
ಅಂದು ನಾನಾಡಿದ, ಇಂದು ಅಳಿದುಳಿದ
ಗದ್ದೆ , ತೋಟ , ಹಾಡಿಗೆ ನನ್ನ ನೆನಪುಂಟೆ
ಅಳಿವಿನಂಚಿನಲ್ಲಿರುವ ಮನೆಗೆ ನನ್ನ ನೆನಪುಂಟೆ
ಹೊಸ ತೆರೆಗಳಿಂದ ಕೂಡಿದ ಸಮುದ್ರಕ್ಕೆ ನನ್ನ ನೆನಪುಂಟೆ
ಈಗ ನನ್ನದಲ್ಲದ ಆಗ ನನ್ನೂರು
ನಾ ಈಗ ಹೋಗಬಾರದೆಂದುಕೊಂಡರೂ ಸೆಳೆಯುವ ತವರು
ಆಗ ಬರಿ ನಗುವ ನೀಡಿದರೂ
ಈಗ ನೀಡುತ್ತಿದೆ ಬರಿ ಕಣ್ಣೀರು , ಬಿಸಿಯುಸಿರು
ಹಿರಿಯ ತಲೆಗಳೆಲ್ಲ ಹೊರಟು ಹೋದಮೇಲೆ
ಉಳಿದವರು ನನ್ನನ್ನು ಗುರುತು ಹಿಡಿಯುವರೇ !!
ಎದೆಯಿಂದ ಹೊರ ನುಗ್ಗಿದೆ ನೆನಪುಗಳ ಲಾವಾರಸ
ಮನದಲ್ಲಿ ಮೂಡಿ ಮರೆಯಾಗಿ ಮತ್ತೆ ಮೂಡಿದೆ
ಕಂಡದೆಲ್ಲ ಹಳೆಯ ನೆನಪು ತರುತ್ತಿದೆ
ಎಲ್ಲವೂ ನನ್ನದಾದರೂ ನನ್ನದಲ್ಲದಾಗಿದೆ
ಜಾಗತೀಕರಣ ನವೀಕರಣದ ವೈಭವೀಕರಣ
ತಿದ್ದಿಬಿಟ್ಟಿದೆ ಊರ ಮುಖವನ್ನ
ಅಳಿಸಿ ಹಾಕಿದೆ ಸನಾತನ ಕುರುಹುಗಳನ್ನ
ಅಂದು ನಾನಾಡಿದ, ಇಂದು ಅಳಿದುಳಿದ
ಗದ್ದೆ , ತೋಟ , ಹಾಡಿಗೆ ನನ್ನ ನೆನಪುಂಟೆ
ಅಳಿವಿನಂಚಿನಲ್ಲಿರುವ ಮನೆಗೆ ನನ್ನ ನೆನಪುಂಟೆ
ಹೊಸ ತೆರೆಗಳಿಂದ ಕೂಡಿದ ಸಮುದ್ರಕ್ಕೆ ನನ್ನ ನೆನಪುಂಟೆ
ಈಗ ನನ್ನದಲ್ಲದ ಆಗ ನನ್ನೂರು
ನಾ ಈಗ ಹೋಗಬಾರದೆಂದುಕೊಂಡರೂ ಸೆಳೆಯುವ ತವರು
ಆಗ ಬರಿ ನಗುವ ನೀಡಿದರೂ
ಈಗ ನೀಡುತ್ತಿದೆ ಬರಿ ಕಣ್ಣೀರು , ಬಿಸಿಯುಸಿರು