ಮನದಿ ಏಕೋ ಮೋಡ ಕವಿದು
ಕತ್ತಲಾಗಿದೆ
ಮೋಡ ಕರಗಿ ಹನಿಗಳೆಂದು
ಜಾರುವುದೋ ಕಾಣದಾಗಿದೆ
ಮೂಢ ಮನವು ಹತ್ತು ಹಲವು
ಚಿಂತೆಯಿಂದ ತುಂಬಿ ಹೋಗಿದೆ
ತುಂಬಿ ತುಳುಕಿ ಚೆಲ್ಲಿ ಹೋದರೂ
ಕತ್ತಲಲ್ಲಿದೆ !!
ಮೊನ್ನೆ , ನಿನ್ನೆ , ಇಂದು ಕೂಡ
ಅದೇ ರೀತಿ
ನಾಳೆ ಕೂಡ ಮುಂದುವರೆಯುವುದೋ
ಇದೆ ಸ್ಥಿತಿ
ಆಗಾಗ ಬೀಸುವ ತಂಗಾಳಿಯು ಕೂಡ
ಕಾರ್ಮೋಡವ ಚದುರಿಸದಾಗಿದೆ
ಹನಿಗಳೆಂದು ಜಾರುವುದೋ ಕಾಣದಾಗಿದೆ
ಒಂಟಿತನವು ಬಿಟ್ಟು ಬಿಡದೆ
ತಂಟೆ ಮಾಡಿದೆ
ಏಕೆ ಹೀಗೆ ನನ್ನ ಬಿಡದೆ ಕಾಡಿ ಹಿಂಡಿದೆ
ಬರು ಬರುತ್ತಾ ಕಾರ್ಮೋಡ ಇನ್ನೂ
ದಟ್ಟವಾಗಿದೆ
ಹನಿಗಳೆಂದು . . . . . . . .