Friday, September 5, 2008

ನೆನಪು

ಮಧುರ ನೆನಪು
ಮನದ ಒಳಗೆ ಹಾಡ ಹಾಡಿದೆ
ನಿನ್ನ ನೆನಪು
ನನ್ನ ಬಿಡದೆ ಇಂದು ಕಾಡಿದೆ

ಅರಿಯದ ತಳಮಳವು 
ವಿಧ ವಿಧ ಭಾವನೆಯು
ಮನದಿ ಮೂಡಿದೆ
ನಿನ್ನ ಹೆಸರು ಹೇಳಿದೆ

ಇನಿಯ ನಿನ್ನ ನೆನಪು ಇಂದು
ಮೋಡಿ ಮಾಡಿದೆ
ಮನದಾಳದ ಒಳಗೆ ಕುಳಿತು
ತೋಡಿ ರಾಗ ಹಾಡಿದೆ

ತಂಗಾಳಿಯ ತಂಪು ಮನಕೆ
ನಿನ್ನ ನೆನಪು ನೀಡಿದೆ
ನೀ ದೂರವಿದ್ದರೂ ನಿನ್ನ
ನೆನಪು ಮನದಿ ನೆಲೆಸಿದೆ







Thursday, September 4, 2008

दोस्त

हमी आपको बोहोत सताते है

हमी आपको बोहोत रुलाते है

हमी आपको बोहोत परेशान करते है

मगर ये मत भूलो मेरे दोस्त की

हमी आपको बोहोत ज्यादा चाहते है

ಕವಿತೆ

ಮನದ ಭಾವನೆಗಳೆಲ್ಲ
ಒಂದರ ಹಿಂದೊಂದು ಹಾರಿ ಬಂದು
ಮುತ್ತಿನ ಹಾರದಂತೆ ಪೋಣಿಸಿಕೊಂಡು
ಆಯಿತೊಂದು ಸುಂದರ ಕವಿತೆ